Posts

ಕನ್ನಡ ನುಡಿ ಮುತ್ತುಗಳು

ಮನಸ್ಸು ಎನ್ನುವುದು ಕಸದ ಬುಟ್ಟಿಯಲ್ಲ, ಬೇಡದ ಹಾಗೂ ಕೆಟ್ಟ  ಯೋಚನೆಗಳೆಂಬ ಕಸವನ್ನು ಅದರಲ್ಲಿ ತುಂಬಬಾರದು. ಮನಸ್ಸು ಒಳ್ಳೆಯದಿದ್ದರೆ ಪ್ರಪಂಚವೇ ಗೌರವಿಸುತ್ತದೆ.
Image
ಈ ಜಗತ್ತಿಗೆ ಬಂದ ಮೇಲೆ ಏನಾದರೂ  ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರಕಲ್ಲಗಳಿಗೂ ಏನು ವ್ಯತ್ಯಾಸ.? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

ಖುಷಿಯಿಂದ ಜೀವಿಸಿ.

Image
ಬದುಕಿನ ಕ್ಷಣ ಕ್ಷಣದ ಖುಷಿ ಅನುಭವಿಸುವವರಿಗೆ ಜೀವನವೇ ಒಂದು ಹಬ್ಬ.

ಕನ್ನಡ ನುಡಿ ಮುತ್ತುಗಳು.

ಸಮಸ್ಯೆಗಳೆಂದರೆ ತಡೆಗೋಡೆಗಳಲ್ಲ, `ನಿಲ್ಲಿಸಿ` ಎಂಬ ಸಿಗ್ನಲೂ ಅಲ್ಲ. ಮುಂದೆ ಸಾಗಬೇಕಾದ ದಾರಿಯ ಮಾರ್ಗದರ್ಶಿ ಫಲಕಗಳು.        - ರಾಬರ್ಟ ಎಚ್ ಶುಲ್ಲರ್, ಚಿಂತಕ

ಪ್ರಚಾರ ಬಯಸದೆ ದುಡಿಯುವರಿಗೆ ನನ್ನ ನಮನ.

Image
           ನುಡಿ  ನಮನ ಅನ್ನ ಅರಿವೆ ವಸತಿಗಾಗಿ ಸಮಯದರಿವು ಇಲ್ಲದೇ ರಟ್ಟೆ ಮುರಿದು ದುಡಿವ ಎನ್ನ ಜನಕ್ಕೆ ನನ್ನ ನುಡಿ ನಮನ. ಯಾರದೋ ಹೆಸರಿಗಾಗಿ ಉಸಿರು ಇರುವ ತನಕ ದುಡಿದು ಪರರ ಹೆಸರಲಿ ಮರೆಯಾಗುವ  ಎನ್ನ ಜನಕ್ಕೆ ನನ್ನ ನುಡಿ ನಮನ. ದೇಶದುನ್ನತಿಗೆ ದುಡಿದು ಹಗಲು ಇರುಳು ಎಲ್ಲ ಮರೆತು ಹೆಗಲು ಕೊಟ್ಟು ಮರೆಯಾಗುವ ಎನ್ನ ಜನಕ್ಕೆ ನನ್ನ ನುಡಿ ನಮನ. ಇಂತಹ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆಸಲ್ಲಿಸುತ್ತಿರುವ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ನನ್ನ ನಮನಗಳು.

ರಾಜಕೀಯ ಪಕ್ಷಗಳು.

Image
ಪಕ್ಷ . ನಮ್ಮ ದೇದೇಶದಲ್ಲಿ ಹಲವು ರಾಜಕೀಯಪಕ್ಷ. ಪಕ್ಷದಲ್ಲಿ ಯಾರು ಇಲ್ಲ ದಕ್ಷ ಪಕ್ಷ ದಕ್ಷವಾಗುವರೆಗೂ ನಮ್ಮ ರೈತರಿಗಿಲ್ಲ ಮೋಕ್ಷ.